Fish Processing Technology extension activities

ಮಂಗಳೂರು ಜಿಲ್ಲೆಯ ಮೀನುಗಾರರಿಗೆ PMFME ಒಂದು ಜಿಲ್ಲೆ, ಒಂದು ಉತ್ಪನ್ನ (ODOP) ಯೋಜನೆ ಅಡಿಯಲ್ಲಿ “ಮೌಲ್ಯವರ್ಧಿತ ಮೀನು ಉತ್ಪನ್ನಗಳ ತಯಾರಿಕೆ ತರಬೇತಿ ಕಾರ್ಯಕ್ರಮ”

ಮೀನು ಸಂಸ್ಕರಣಾ ತಾಂತ್ರಿಕ ವಿಭಾಗ, ಮೀನುಗಾರಿಕಾ ಮಹಾವಿದ್ಯಾಲಯ, ಮಂಗಳೂರು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ಹಾಗೂ ಮೀನುಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್ ಮಂಗಳೂರು ರವರ ಜಂಟಿ ಸಹಯೋಗದೊಂದಿಗೆ ಮಂಗಳೂರು ಜಿಲ್ಲೆಯ ಮೀನುಗಾರರಿಗೆ ಪ್ರಧಾನ ಮಂತ್ರಿ ಕಿರು ಆಹಾರ ಉದ್ಯಮ ಸಾಂಸ್ಥೀಕರಣ, ಒಂದು ಜಿಲ್ಲೆ, ಒಂದು ಉತ್ಪನ್ನ (ODOP) ಯೋಜನೆಯಡಿಯಲ್ಲಿ ಮೌಲ್ಯವರ್ಧಿತ ಮೀನು ಉತ್ಪನ್ನಗಳ ತಯಾರಿಕೆ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ದಿನಾಂಕ 17 ನೇ ಆಗಸ್ಟ್ 2022 ರಂದು ಆಯೋಜಿಸಲಾಗಿತ್ತು. ಡಾ ಸುಶ್ಮಿತ ರಾವ್ , ಉಪನಿರ್ದೆಶಕರು, ಮೀನುಗಾರಿಕೆ ಇಲಾಖೆ ದಕ್ಷಿಣ ಕನ್ನಡ ಮಂಗಳೂರು ಇವರು ಸಾಂಕೇತಿಕವಾಗಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡುತ್ತಾ, “ಮೌಲ್ಯವರ್ಧಿತ ಮೀನಿನ ಉತ್ಪನ್ನಗಳ” ಪ್ರಾಮುಖ್ಯತೆ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ವಿಫುಲ ಅವಕಾಶಗಳ ಬಗ್ಗೆ ವಿಶ್ಲೇಷಿದರು. ಡಾ|| ಎಚ್ ಎನ್ ಆಂಜನೇಯಪ್ಪ ಡೀನ್ (ಪ್ರಭಾರ) ,ಮಿನುಗಾರಿಕಾ ಮಹಾವಿದ್ಯಾಲಯ, ಮಂಗಳೂರು ಅಧ್ಯಕ್ಷತೆಯನ್ನು ವಹಿಸಿ ವೈಜ್ಞಾನಿಕವಾಗಿ ಮೀನಿನ ಕಟ್ಲೇಟ್ಸ್, ಸಿಗಡಿ ಉಪ್ಪಿನಕಾಯಿ, ಮೀನಿನ ಫಿಂಗೆರ್ಸ್, ಮೀನಿನ ಪಾಪಡ್ ಮತ್ತು ಒಣ ಸಿಗಡಿ ಚಟ್ನಿ ಪುಡಿ ತಯಾರಿಕೆಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ವಿಫುಲ ಅವಕಾಶಗಳ ಬಗ್ಗೆ ನುಡಿದರು ಹಾಗೂ ಮೀನುಗಾರ ಮಹಿಳೆಯರ ಸಬಲೀಕರಣಕ್ಕೆ ಇದೊಂದು ಸದಾವಕಾಶ ಎಂದು ನುಡಿದರು. ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಮೀನು ಸಂಸ್ಕರಣಾ ತಾಂತ್ರಿಕ ವಿಭಾಗ ಮತ್ತು ಈ ಯೋಜನೆಯ ಪ್ರಧಾನ ತರಬೇತುದಾರರಾದ ಡಾ|| ಬಿ. ಮಂಜಾನಾಯ್ಕ, ಈ ಯೋಜನೆಯ ಬಗ್ಗೆ ಕಿರುಪರಿಚಯ ನೀಡಿದರು ಹಾಗು ಕಾರ್ಯಕ್ರಮ ವನ್ನು ಸಂಯೋಜಿಸಿದರು. ಶ್ರೀ ದಿಲೀಪ್ ಕುಮಾರ್ ಮೀನುಗಾರಿಕಾ ಸಹಾಯಕ ನಿರ್ದೇಶಕರು, ಮಂಗಳೂರು ಹಾಗು ಶ್ರೀ ಸತೀಶ್ ಮಾಬೆನ್ , ಜಿಲ್ಲಾ ಸಂಪನ್ಮೂಲ ವೆಕ್ತಿ (PMFME) ರವರು ಉಪಸ್ಥಿತರಿದ್ದರು. ವೈಜ್ಞಾನಿಕವಾಗಿ ಮೀನಿನ ಕಟ್ಲೇಟ್ಸ್, ಸಿಗಡಿ ಉಪ್ಪಿನಕಾಯಿ ಮತ್ತು ಒಣ ಸಿಗಡಿ ಚಟ್ನಿ ಪುಡಿ, ಮೀನಿನ ಫಿಂಗೆರ್ಸ್, ಮೀನಿನ ಪಾಪಡ್ ತಯಾರಿಕೆ ಮತ್ತು ಉತ್ತಮ ಪ್ಯಾಕೇಜ್‍ಗಳ ಬಗ್ಗೆ ಪ್ರಾತ್ಯಕ್ಷತೆಯನ್ನು ನೀಡಲಾಯಿತು. ಡಾ|| ಸಿದ್ದಪ್ಪಾಜಿ ಎಸ್, ಸಹ ಪ್ರಾಧ್ಯಾಪಕರು, ಡಾ|| ಗಜೇಂದ್ರ, ಸಹಾಯಕ ಪ್ರಾಧ್ಯಾಪಕರು ಡಾ|| ಎಮ್. ವಿ. ಚಂದ್ರ, ಸಹಾಯಕ ಪ್ರಾಧ್ಯಾಪಕರು, ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾತ್ಯಕ್ಷತೆಯನ್ನು ನೀಡಿದರು. ಈ ಕಾರ್ಯಕ್ರಮದ ಬಗ್ಗೆ ಶಿಬಿರಾರ್ಥಿಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

 

PMFME-ODOP Training Programme

 

 

PMFME-ODOP Training

 

ಸುಧಾರಿತ ವಿಧಾನಗಳಿಂದ ಒಣಮೀನು ಸಂಸ್ಕರಣೆ ಹಾಗೂ ಮಾರುಕಟ್ಟೆಗೆ ಇರುವ ವಿಫುಲ ಅವಕಾಶಗಳು- ತರಬೇತಿ ಕಾರ್ಯಾಗಾರ

ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು ಹಾಗೂ ಮೀನು ಸಂಸ್ಕರಣಾ ತಾಂತ್ರಿಕ ವಿಭಾಗ, ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ, ರವರ ಪ್ರಾಯೋಜಕತ್ವದಲ್ಲಿ ಉತರ ಕನ್ನಡ ವಿಭಾಗದ (ಕುಮಟಾ, ಹೊನ್ನಾವರ ಮತ್ತು ಭಟ್ಕಳ) ಮೀನುಗಾರರಿಗೆ “ಸುಧಾರಿತ ವಿಧಾನಗಳಿಂದ ಒಣಮೀನು ಸಂಸ್ಕರಣೆ ಹಾಗೂ ಮಾರುಕಟ್ಟೆಗೆ ಇರುವ ವಿಫುಲ ಅವಕಾಶಗಳು” ಬಗ್ಗೆ 2 ದಿನಗಳ ತರಬೇತಿ ಕಾರ್ಯಾಗಾರವನ್ನು ದಿನಾಂಕ 14 – 15 ನೇ ಮಾರ್ಚ್ 2022 ರಂದು ಆಯೋಜಿಸಲಾಗಿದ್ದು, ದಿನಾಂಕ 14 ನೇ, ಮಾರ್ಚ್, 2022 ರಂದು ಬೆಳಗ್ಗೆ 10:00 ಗಂಟೆಗೆ ಶ್ರೀ ಪ್ರದೀಪ್ ಡಿಸೋಜ ಕಾರ್ಯದರ್ಶಿಗಳು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು ಇವರು ದೀಪ ಬೆಳಗುವ ಮೂಲಕ ತರಬೇತಿ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿದರು.

ಶ್ರೀ ಪ್ರದೀಪ್ ಡಿಸೋಜ ರವರು ಮಾತನಾಡಿ ಸುಧಾರಿತ ವಿಧಾನಗಳಿಂದ ಒಣಮೀನು ಸಂಸ್ಕರಣೆಗೆ ಬೇಕಾಗುವ ಆರ್ಥಿಕ ಸೌಲಭ್ಯಗಳ ಬಗ್ಗೆ ವಿಶ್ಲೇಷಿಸಿ ಉತರ ಕನ್ನಡ ವಿಭಾಗದ (ಕುಮಟಾ, ಹೊನ್ನಾವರ ಮತ್ತು ಭಟ್ಕಳ) ಎಲ್ಲಾ ಪ್ರಗತಿಪರ ಮೀನುಗಾರರು ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು ಇವರಿಂದ PMSSY ಕೇಂದ್ರದ ಯೋಜನೆಯಡಿಯಲ್ಲಿ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ನುಡಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು ಇವರು ನಿರಂತರವಾಗಿ ಸುಧಾರಿತ ವಿಧಾನಗಳಿಂದ ಒಣಮೀನು ಸಂಸ್ಕರಣೆಯ ಬಗ್ಗೆ ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು ಇವರೊಂದಿಗೆ ಕೈ ಜೋಡಿಸಿ ಮಂಗಳೂರು ಉಡುಪಿ ವಿಭಾಗದ ಮೀನುಗಾರರಿಗೆ ತರಬೇತಿಯನ್ನು ನೀಡುತ್ತಾ ಬರುತ್ತಿದೆ. ಇದಕ್ಕೆ ಮೀನುಗಾರಿಕಾ ಮಹಾವಿದ್ಯಾಲಯವು ಸಹ ಸಹಕರಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ತರಬೇತಿ ಕಾರ್ಯಾಗಾರವುವನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಹಾಗೂ ಅಂಕೋಲ ವಿಭಾಗದ ಮೀನುಗಾರರಿಗೆ ನೀಡಲಾಗುವುದು ಎಂದು ಹೇಳಿದರು.

ಶ್ರೀ ಪ್ರದೀಪ್ ಡಿಸೋಜ ಕಾರ್ಯದರ್ಶಿಗಳು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು ರವರು ಒಣಮೀನಿನ ಉತ್ಪಾದನೆಯಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯತೆಯನ್ನು ಕಾಪಾಡುವಲ್ಲಿ ಮೀನುಗಾರರ ಪಾತ್ರವನ್ನು ಸುವಿಸ್ಥಾರವಾಗಿ ತಿಳಿಸಿದರು. ಮೀನುಗಾರಿಕಾ ಇಲಾಖೆ ಹಾಗೂ ಮೀನುಗಾರಿಕಾ ಮಹಾವಿದ್ಯಾಲಯದ ಸಹಯೋಗದ ಕಾರ್ಯಕ್ರಮದಿಂದ ದೊರಕುವ ಲಾಭದ ಪ್ರಮಾಣದ ಬಗ್ಗೆ ಶಿಬಿರಾರ್ಥಿಗಳಲ್ಲಿ ಅನಿಸಿಕೆಯನ್ನು ಹಂಚಿಕೊಂಡರು. ಪ್ರಾಧಿಕಾರದ ಕಡೆಯಿಂದ ಒಣಮೀನು ಸಂಸ್ಕರಣದ ವ್ಯವಸ್ಥೆಯನ್ನು ಸರ್ಕಾರದ ಅನುಧಾನದ ಆಧಾರದ ಮೇಲೆ ಮೀನುಗಾರರಿಗೆ ಅವಕಾಶಗಳನ್ನು ಕಲ್ಪಿಸುವಲ್ಲಿ ಸಖ್ಯವಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ. ಪಿ. ನಾಗರಾಜ್, ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಕಾರವಾರ ಇವರು ಮಾತನಾಡಿ ಮೀನುಗಾರಿಕಾ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಇರುವ ಸೌಲಭ್ಯಗಳು ಹಾಗೂ ಆರ್ಥಿಕ ವ್ಯವಸ್ಥೆಯ ಬಗ್ಗೆ ಶಿಬಿರಾರ್ಥಿಗಳ ಗಮನ ಸೆಳೆದರು. ತಮ್ಮ ಸೇವೆಯ ಅವಧಿಯಲ್ಲಿ ಒಣಮೀನು, ಸಿಹಿನೀರು ಮೀನು ಮತ್ತು ಸಮುದ್ರ ಆಹಾರ ವ್ಯಾಪಾರಗಳೊಂದಿಗಿನ ಒಡನಾಟವನ್ನು ಸ್ಮರಿಸಿದರು. ಮೀನಿನ ಹಾಗೂ ಒಣಮೀನು ಸಂಸ್ಕರಣದಲ್ಲಿ ಸ್ಥಳೀಯವಾಗಿ ಅಳವಡಿಸಿಕೊಂಡಿರುವ ವಿಧಾನಗಳಲ್ಲಿನ ನೂನ್ಯತೆಗಳನ್ನು ಸರಿಪಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು. ಕರಾವಳಿಯಲ್ಲಿನ ಒಣಮೀನು ಉದ್ಯಮದ ಹಿನ್ನಲೆ ಹಾಗೂ ಅದರ ಲಾಭಗಳ, ಅವಕಾಶಗಳ ಬಗ್ಗೆ ವಿವರಿಸಿದರು. ಸುಧಾರಿತ ಒಣಮೀನು ಸಂಸ್ಕರಣೆಯಿಂದ ಮೌಲ್ಯವರ್ಧನೆ ಹಾಗೂ ಪದಾರ್ಥದ ಮೌಲ್ಯವನ್ನು ಹೆಚ್ಚಿಸುವ ಕಲೆಗಳ ಬಗ್ಗೆ ಶಿಬಿರಾರ್ಥಿಗಳಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಮಾರುಕಟ್ಟೆಯಲ್ಲಿ ಮೀನುಗಾರಿಕ ಮಹಿಳೆಯರು ಮೀನಿನ ವ್ಯಾಪಾರ ಹಾಗೂ ಮಾರುವ ವಿಧಾನಗಳಲ್ಲಿನ ಬದಲಾವಣೆಯ ಬಗ್ಗೆ ಇಚ್ಛೆಯನ್ನು ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾದ ಶ್ರೀ ಸುರೇಶ್ ಮೇಸ್ತಾ, ಅಧ್ಯಕ್ಷರು ಒಣಮೀನು ಸಹಕಾರ ಸಂಘ, ಹೊನ್ನಾವರ ಹಾಗು ಶ್ರೀ ಅಮ್ಜಾ ಪಟೇಲ್, ಅಧ್ಯಕ್ಷರು ಮೀನುಗಾರಿಕಾ ಸಹಕಾರ ಸಂಘ, ಕಾಸರಕೋಡ್ ಇವರು ಮಾತನಾಡಿ ಈ ತರಹದ ತರಬೇತಿ ಕಾರ್ಯಗಾರವನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆಯೆಂದು ಆಶಿಸಿದರು.

ಡಾ|| ಬಿ. ಮಂಜಾನಾಯ್ಕ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಹಾಗೂ ಈ ತರಬೇತಿ ಕಾರ್ಯಾಗಾರದ ಮುಖ್ಯ ಸಂಯೋಜಕರು, ಮೀನು ಸಂಸ್ಕರಣಾ ತಾಂತ್ರಿಕ ವಿಭಾಗ, ಇವರು ತರಬೇತಿ ಕಾರ್ಯಾಗಾರದ ಬಗ್ಗೆ ಕಿರುಪರಿಚಯ ನೀಡಿ ಎಲ್ಲಾ ಗಣ್ಯರನ್ನು ಹಾಗೂ ಶಿಬಿರಾರ್ಥಿಗಳನ್ನು ಸ್ವಾಗತಿಸಿದರು.

ಮುಖ್ಯ ಸಂಯೋಜಕರು ಮಾತನಾಡಿ ಸುಧಾರಿತ ವಿಧಾನಗಳಿಂದ ಒಣ ಮೀನು ಸಂಸ್ಕರಣೆ ಮಾಡಿ ಉತ್ತಮ ಗುಣಮಟ್ಟದ ಮೀನನ್ನು ಬಳಸಿ ಉತ್ತಮ ಪ್ಯಾಕೇಜ್, ಬ್ರ್ಯಾಂಡ್, FSSAI ಪರವಾನಗಿ ಪೌಷ್ಟಿಕಾಂಶಗಳ ವಿವರ, ನೈರ್ಮಲ್ಯತೆ ಹಾಗೂ ಸ್ವಚ್ಚತೆಯಿಂದ ಸಂಸ್ಕರಿಸಿದರೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗಳಗೆ ಉತ್ತಮ ಬೆಲೆಗೆ ಮಾರಬಹುದಾಗಿದೆ. ಸಂಸ್ಕರಿಸಿದ ಒಣ ಮೀನನ್ನು ಮಳೆಗಾಲದಲ್ಲಿ ಹಾಗೂ ಮೀನುಗಾರಿಕೆ ನಿಷೇಧದ ಸಮಯದಲ್ಲಿ ಅತಿ ಹೆಚ್ಚಾಗಿ ಬಳಸಿ ಮೌಲ್ಯವರ್ಧನೆಯನ್ನು ಹೆಚ್ಚಿಸಬಹುದಾಗಿದೆ ಎಂದು ಹೇಳಿದರು.

ಮೀನುಗಾರಿಕಾ ಮಹಾವಿದ್ಯಾಲಯದ ಸಿಬ್ಬಂದಿಗಳಾದ ಡಾ|| ಅರುಣ್ ಕುಮಾರ್, ಡಾ|| ಗಜೇಂದ್ರ, ವಿದ್ಯಾರ್ಥಿಗಳಾದ ಗೋಕುಲ್, ನಂದನ್ ಹಾಗೂ ಹರ್ಷವರ್ಧನ್ ಈ ಕಾರ್ಯಕ್ರಮದ ಆಯೋಜನೆಯಲ್ಲಿ ಪಾಲ್ಗೊಂಡಿರುತ್ತಾರೆ.

ಕೊನೆಯದಾಗಿ ಮೀನು ಸಂಸ್ಕರಣಾ ತಾಂತ್ರಿಕ ವಿಭಾಗದ ಡಾ|| ಗಜೇಂದ್ರ, ಸಹಾಯಕ ಪ್ರಾಧ್ಯಾಪಕ, ಇವರು ವಂದನಾರ್ಪಣೆಯನ್ನು ಮಾಡಿದರು.

ತರಬೇತಿ ಕಾರ್ಯಾಗಾರವನ್ನು ಆಯೋಜಿಸಿರುವ ಬಗ್ಗೆ ಶಿಬಿರಾರ್ಥಿಗಳು ಹಾಗೂ ಗಣ್ಯರು ಪ್ರಶಂಸೆ ವ್ಯಕ್ತ ಪಡಿಸಿದರು. ತರಬೇತಿಯ ಕೊನೆಯದಿನದಂದು ಶಿಬಿರಾರ್ಥಿಗಳಿಗೆ ಹೊನ್ನಾವರದ ಸುತ್ತಮುತ್ತಲಿನ ಒಣಮೀನು ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ.

 

 

ಪ್ರಧಾನ ಮಂತ್ರಿ ಕಿರು ಆಹಾರ ಉದ್ಯಮ ಸಾಂಸ್ಥೀಕರಣ, ಒಂದು ಜಿಲ್ಲೆ–ಒಂದು ಉತ್ಪನ್ನ

ಮೀನು ಸಂಸ್ಕರಣಾ ತಾಂತ್ರಿಕ ವಿಭಾಗ, ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ, ಹಾಗೂ ಕೃಷಿ ಇಲಾಖೆ, ಮಂಗಳೂರು, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ, ಬೆಂಗಳೂರು ರವರ ಆರ್ಥಿಕ ಸಹಯೋಗದೊಂದಿಗೆ ಪ್ರಧಾನ ಮಂತ್ರಿ ಕಿರು ಆಹಾರ ಉದ್ಯಮ ಸಾಂಸ್ಥೀಕರಣ, ಒಂದು ಜಿಲ್ಲೆ–ಒಂದು ಉತ್ಪನ್ನ PMFME (ODOP) ಯೋಜನೆಯಡಿಯಲ್ಲಿ, ಮಂಗಳೂರು ವಿಭಾಗದ (ಬೆಳ್ತಂಗಡಿ, ಸುಳ್ಯ, ಬಜ್ಪೆ, ತಣ್ಣೀರು ಬಾವಿ, ಪಣಂಬೂರು, ಮಂಗಳೂರು) ಮೀನುಗಾರರಿಗೆ “ಸುಧಾರಿತ ವಿಧಾನಗಳಿಂದ ಒಣಮೀನು ಸಂಸ್ಕರಣೆ ಮತ್ತು ಮೌಲ್ಯವರ್ದಿತ ಮೀನಿನ ಉತ್ಪನ್ನಗಳ ತಯಾರಿಕೆ ಹಾಗೂ ಮಾರುಕಟ್ಟೆಗೆ ಇರುವ ವಿಫುಲ ಅವಕಾಶಗಳು” ಬಗ್ಗೆ 3 ದಿನಗಳ ತರಬೇತಿ ಕಾರ್ಯಾಗಾರವನ್ನು ದಿನಾಂಕ 7 – 9 ಮಾರ್ಚ್ 2022 ರಂದು ಆಯೋಜಿಸಲಾಗಿದ್ದು, ದಿನಾಂಕ 7, ಮಾರ್ಚ್, 2022 ರಂದು ಡಾ|| ಕುಮಾರ್, IAS, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ದ.ಕ. ಇವರು ದೀಪ ಬೆಳಗುವ ಮೂಲಕ ತರಬೇತಿ ಕಾರ್ಯಗಾರವನ್ನು ಚಾಲನೆ ಮಾಡಿದರು. ಡಾ|| ಕುಮಾರ್ ಮಾತನಾಡಿ PMFME – ODOP ಯೋಜನೆಯಡಿಯಲ್ಲಿ ಕಿರು ಮತ್ತು ಸಣ್ಣ ಆಹಾರ ಉದ್ದಿಮೆಯನ್ನು ಅಭಿವೃದ್ದಿಗೊಳಿಸಲು ಮೌಲ್ಯವರ್ದಿತ ಮೀನಿನ ಉತ್ಪನ್ನಗಳ ತಯಾರಿಕೆ ಹಾಗೂ ಒಣಮೀನು ಸಂಸ್ಕರಣೆಗೆ ಬೇಕಾಗುವ ಆರ್ಥಿಕಸೌಲಭ್ಯಗಳ ಬಗ್ಗೆ ವಿಶ್ಲೇಷಿಸಿ ಎಲ್ಲಾ ಪ್ರಗತಿಪರ ಮೀನುಗಾರರು ಈ ಯೋಜನೆಯ ಲಾಭಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು. ಹೊಸ ಉದ್ದಿಮೆಯನ್ನು ಸುಮಾರು ರೂ. 10 ಲಕ್ಷದ ಬಜೆಟ್ ರೂಪದಲ್ಲಿ ತಯಾರುಮಾಡಿ ಬ್ಯಾಂಕಿನ ಮೂಲಕ ಸೌಲಭ್ಯವನ್ನು ಪಡೆಯಬಹುದಾಗಿದೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ.ಬೋಜ್ಯಾ ನಾಯ್ಕ ಹಾಗೂ ಶ್ರೀ.ವಸಂತ ಬಿರಾದರ್, ಗೌರವಾನ್ವಿತ,ಆಡಳಿತ ಮಂಡಳಿಯ ಸದಸ್ಯರು ಕಪಪಮೀವಿವಿ, ಬೀದರ್‍ರವರು ಮಾತನಾಡಿ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ನುಡಿದರು.ಶ್ರೀಮತಿ ಸೀತಾ ಎಂ. ಸಿ., ಜಂಟಿ ನಿರ್ದೇಶಕರು, ಕೃಷಿ ಇಲಾಖೆ, (PMFME--ನೋಡಲ್ ಅಧಿಕಾರಿ) ಮಂಗಳೂರು ಹಾಗೂ ಡಾ|| ಸುಶ್ಮಿತಾ ರಾವ್, ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ, ಮಂಗಳೂರುರವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದು, ತರಬೇತಿ ಆಯೋಜಿಸಿರುವ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ. ನಿತಿನ್‍ಕುಮಾರ್, ಅಧ್ಯಕ್ಷರು, ಶ್ರೀ. ದಿನೇಶ್ ಕುಮಾರ್ ಕಲ್ಲೇರ್ ವ್ಯವಸ್ಥಾಪಕ ನಿರ್ದೇಶಕರು, ಕೆಎಫ್‍ಡಿಸಿ, ಮಂಗಳೂರುರವರು ಮಾತನಾಡಿ ಮೌಲ್ಯವರ್ದಿತ ಮೀನಿನ ಉತ್ಪನ್ನಗಳ ಮಾರುಕಟ್ಟೆಯ ಬಗ್ಗೆ ಕೆಎಫ್‍ಡಿಸಿ ಮೂಲಕ ವಿವಿಧ ಮಳಿಗೆಯಲ್ಲಿ ಕರ್ನಾಟಕದಾದ್ಯಂತ ಮಾರಾಟ ಮಾಡಲು ಪ್ರೋತ್ಸಾಹಿಸುವುದಾಗಿ ಹೇಳಿದರು.ಡಾ|| ಶಿವಕುಮಾರ್‍ಮಗಧ, ಡೀನ್, ಮಿನುಗಾರಿಕಾ ಮಹಾವಿದ್ಯಾಲಯ, ಮಂಗಳೂರು ಇವರು ಅಧ್ಯಕ್ಷೀಯ ಭಾಷಣವನ್ನು ಮಂಡಿಸಿದರು ಹಾಗೂ ಯೋಜನೆಯ ಆರ್ಥಿಕ ಲಾಭಗಳ ಬಗೆ,್ಗ ಮೀನಿನ ಗುಣಮಟ್ಟ, ತಾಜಾತನ, ಬ್ರ್ಯಾಂಡಿಂಗ್, ಪರವಾನಿಗೆ ಹಾಗೂ ಇತರೆ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು. ಡಾ|| ಬಿ. ಮಂಜಾನಾಯ್ಕ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಮೀನು ಸಂಸ್ಕರಣಾ ತಾಂತ್ರಿಕ ವಿಭಾಗ, ಹಾಗೂ PMFME –ODOPಯ ಪ್ರಧಾನ ತರಬೇತುದಾರರು, ಈ ಯೋಜನೆಯ ಬಗ್ಗೆ ಕಿರುಪರಿಚಯ ನೀಡಿ ಎಲಾ ಗಣ್ಯಾತಿ ಗಣ್ಯರನ್ನು ಹಾಗೂ ಫಲಾನುಭವಿಗಳನ್ನು ಸ್ವಾಗತಿಸಿದರು. ಕುಮಾರಿ ಮಂದಾರ ಮತ್ತು ಕುಮಾರಿ ಸೌಚಿದರ್ಯ ಕಾರ್ಯಕ್ರಮನಿರೂಪಣೆ ಮಾಡಿದರು. ಮೀನುಗಾರಿಕಾ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ.ಗಣೇಶ್ ಪ್ರಸಾದ್‍ಎಲ್. ರವರು ವಂದನಾರ್ಪಣೆಯನ್ನು ಮಾಡಿದರು. ಈ ಕಾರ್ಯಕ್ರಮದ ಬಗ್ಗೆ ಶಿಬಿರಾರ್ಥಿಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

 

ಮೌಲ್ಯವರ್ಧಿತ ಮೀನು ಉತ್ಪನ್ನಗಳ ತಯಾರಿಕೆ -ತರಬೇತಿ ಕಾರ್ಯಾಗಾರ

ಮೀನು ಸಂಸ್ಕರಣಾ ತಾಂತ್ರಿಕ ವಿಭಾಗ, ಮೀನುಗಾರಿಕಾ ಮಹಾವಿದ್ಯಾಲಯ, ಮಂಗಳೂರು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ಹಾಗೂ ಮೀನುಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ ರವರ ಜಂಟಿ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ 37 ಮಹಿಳಾ ಮೀನುಗಾರರಿಗೆ ಪ್ರಧಾನ ಮಂತ್ರಿ ಸಣ್ಣ ಆಹಾರ ಉದ್ಯಮ ಸಾಂಸ್ಥೀಕರಣ, ಒಂದು ಜಿಲ್ಲೆ, ಒಂದು ಉತ್ಪನ್ನ (ODOP) ಯೋಜನೆಯಡಿಯಲ್ಲಿ ಮೌಲ್ಯವರ್ಧಿತ ಮೀನು ಉತ್ಪನ್ನಗಳ ತಯಾರಿಕೆ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ದಿನಾಂಕ 9ನೇ ಫೆಬ್ರವರಿ 2022ರಂದು ಆಯೋಜಿಸಲಾಗಿತ್ತು. ಡಾ|| ಶಿವಕುಮಾರ್ ಮಗದ, ಡೀನ್, ಮಿನುಗಾರಿಕಾ ಮಹಾವಿದ್ಯಾಲಯ, ಮಂಗಳೂರು ಇವರು ಅಧ್ಯಕ್ಷತೆಯನ್ನು ವಹಿಸಿ ಸಾಂಕೇತಿಕವಾಗಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡುತ್ತಾ, “ಮೌಲ್ಯವರ್ಧಿತ ಮೀನಿನ ಉತ್ಪನ್ನಗಳ ಹಾಗೂ ಉಪ ಉತ್ಪನ್ನ”ಗಳ ಪ್ರಾಮುಖ್ಯತೆ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ವಿಫುಲ ಅವಕಾಶಗಳ ಬಗ್ಗೆ ವಿಶ್ಲೇಷಿದರು. ಮೀನುಗಾರ ಮಹಿಳೆಯರ ಸಬಲೀಕರಣಕ್ಕೆ ಇದೊಂದು ಸದಾವಕಾಶ ಎಂದು ನುಡಿದರು. ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಮೀನು ಸಂಸ್ಕರಣಾ ತಾಂತ್ರಿಕ ವಿಭಾಗ ಮತ್ತು ಈ ಯೋಜನೆಯ ಪ್ರಧಾನ ತರಬೇತುದಾರರಾದ ಡಾ|| ಬಿ. ಮಂಜಾನಾಯ್ಕ, ಈ ಯೋಜನೆಯ ಬಗ್ಗೆ ಕಿರುಪರಿಚಯ ನೀಡಿದರು. ಮೀನುಗಾರಿಕೆ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ|| ಎಸ್. ವರದರಾಜು, ಕು. ಸುಮಲತ, ಮೀನುಗಾರಿಕಾ ಸಹಾಯಕ ನಿರ್ದೇಶಕರು, ಕುಂದಾಪುರ ಹಾಗೂ ಶ್ರೀ. ದಿವಾಕರ ಕಾರ್ವಿ ಮೀನುಗಾರಿಕಾ ಸಹಾಯಕ ನಿರ್ದೇಶಕರು ಉಡುಪಿ ರವರು ಉಪಸ್ಥಿತರಿದ್ದರು. ವೈಜ್ಞಾನಿಕವಾಗಿ ಮೀನಿನ ಉಪ್ಪಿನಕಾಯಿ, ಸಿಗಡಿ ಉಪ್ಪಿನಕಾಯಿ ಮತ್ತು ಒಣ ಸಿಗಡಿ ಚಟ್ನಿ ಪುಡಿ ತಯಾರಿಕೆಯ ಬಗ್ಗೆ ಪ್ರಾತ್ಯಕ್ಷತೆಯನ್ನು ನೀಡಲಾಯಿತು. ಡಾ|| ಸಿದ್ದಪ್ಪಾಜಿ ಎಸ್, ಸಹ ಪ್ರಾಧ್ಯಾಪಕರು, ಶ್ರೀ.ಗಣೇಶ್ ಪ್ರಸಾದ್ ಎಲ್. ಸಹಾಯಕ ಪ್ರಾಧ್ಯಾಪಕರು, ಡಾ|| ಎಮ್. ವಿ. ಚಂದ್ರ, ಸಹಾಯಕ ಪ್ರಾಧ್ಯಾಪಕರು, ಡಾ|| ಗಜೇಂದ್ರ, ಸಹಾಯಕ ಪ್ರಾಧ್ಯಾಪಕರು ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾತ್ಯಕ್ಷತೆಯನ್ನು ನೀಡಿದರು. ಮೀನುಗಾರಿಕಾ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ. ಗಣೇಶ್ ಪ್ರಸಾದ್ ಎಲ್‍ರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದನಾರ್ಪಣೆಯನ್ನು ಮಾಡಿದರು. ಈ ಕಾರ್ಯಕ್ರಮದ ಬಗ್ಗೆ ಶಿಬಿರಾರ್ಥಿಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

 

ಮೀನು ಸಂಸ್ಕರಣಾ ತಾಂತ್ರಿಕ ವಿಭಾಗ, ಹೊಯ್ಗೆಬಜಾರ್, ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಿರುವ ದಿನಾಂಕ 15, 16, ಮತ್ತು 18 ನೇ ಜನವರಿ (ಮಂಗಳೂರು ವಿಭಾಗ) ರಂದು ಮಹಿಳಾ ಮೀನುಗಾರರಿಗೆ ತರಬೇತಿ ಕಾರ್ಯಕ್ರಮ.

ಮೀನು ಸಂಸ್ಕರಣಾ ತಾಂತ್ರಿಕ ವಿಭಾಗ, ಹೊಯ್ಗೆಬಜಾರ್, ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಿರುವ ದಿನಾಂಕ 8, 9 ನೇ ಫೆಬ್ರವರಿ, 2021 (ಉಡುಪಿ ವಿಭಾಗ) ರಂದು ಮಹಿಳಾ ಮೀನುಗಾರರಿಗೆ ತರಬೇತಿ ಕಾರ್ಯಕ್ರಮ.

 

 

2018 - 2019

2017 - 2018

Archive